ಗ್ರಂಥಾಲಯ

ಸಂಸ್ಥೆಯು ಯುರಾಲಜಿ, ನೆಫ್ರೋಲಜಿ, ರೋಗಲಕ್ಷಣಶಾಸ್ತ್ರ, ಜೀವರಸಾಯನಶಾಸ್ತ್ರ, ಮಿಣಿಜೀವಶಾಸ್ತ್ರ, ಅರವಳಿಕೆಶಾಸ್ತ್ರ ಹಾಗೂ ಇತರೇ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಜರ್ನಲ್‍ಗಳನ್ನು ಹಾಗೂ ಅಂತಜಾಲ ಸೌಲಭ್ಯವನ್ನು ಹೊಂದಿದೆ.

ಗ್ರಂಥಾಲಯಕ್ಕೆ ಹೊಂದಿಕೊಂಡಂತೆ 150 ಆಸನ ವ್ಯವಸ್ಥೆಯುಳ್ಳ ಹವಾನಿಯಂತ್ರಿತ ಸೆಮಿನಾರ್ ಹಾಲ್ ಅನ್ನು ಹೊಂದಿದೆ. ಇಲ್ಲಿ ಓವರ್‍ಹೆಡ್ ಪ್ರೊಜೆಕ್ಟರ್, ಸ್ಲೈಡ್ ಪ್ರೊಜೆಕ್ಟರ್, ಮೈಕ್, ವಿಸಿಪಿಯಂತಹ ಸೌಕರ್ಯಗಳನ್ನು ಅಳವಡಿಸಲಾಗಿದೆ.

ಸಂಸ್ಥೆಯ ಬೋಧಕ ಸಿಬ್ಬಂದಿಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ವೈಜ್ಞಾನಿಕ ವರದಿಗಳನ್ನು ಮಂಡಿಸಿರುತ್ತಾರೆ.