ಉದ್ದೇಶಗಳು

  • ನೆಫ್ರೋ-ಯುರಾಲಜಿ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ಖಾಯಿಲೆಗಳ ವಿವರಣೆ ನೀಡುವ ಒಂದು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸ್ಥಾಪಿಸಿ, ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುವುದು.
  • ನೆಫ್ರೋ-ಯುರಾಲಜಿಗೆ ಸಂಬಂಧಿಸಿದ ಖಾಯಿಲೆಗಳನ್ನು ಹೊಂದಿರುವ ರೋಗಿಗಳಿಗೆ ಮುಂದುವರಿದ ಸಮರ್ಪಕ ಚಿಕಿತ್ಸೆ ಒದಗಿಸುವುದು.
  • ನೆಫ್ರೋ-ಯುರಾಲಜಿ ವೈದ್ಯ ವಿಜ್ಞಾನ ಕ್ಷೇತ್ರದಲ್ಲಿನ ಖಾಯಿಲೆಗಳ ಬಗ್ಗೆ ತರಬೇತಿ, ಸಂಶೋಧನೆ, ರೋಗ ವಿದ್ಯಾಭ್ಯಾಸ, ರೋಗ ನಿರ್ಧಾರ, ಚಿಕಿತ್ಸೆಗಳಿಗೆ ನೆರವು ಮತ್ತು ಉತ್ತೇಜನ ನೀಡುವುದು.
  • ಮೂತ್ರಜನಕಾಂಗದ ಖಾಯಿಲೆಗಳಾದ ಮೂತ್ರಜನಕಾಂಗ ವಿಫಲತೆ, ಮೂತ್ರಪಿಂಡ ಕಸಿ (ಜೋಡಣೆ) ನೆರವೇರಿಸುವುದು.
  • ರಾಜ್ಯದ ಜಿಲ್ಲಾ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಂದ ನೆಫ್ರೋ-ಯುರಾಲಜಿಗೆ ಸಂಬಂಧಿಸಿದ ಖಾಯಿಲೆಯಿರುವ ರೋಗಿಗಳನ್ನು ತಪಾಸಣೆಗಾಗಿ ಈ ಸಂಸ್ಥೆಗೆ ಕಳುಹಿಸಿದಾಗ ರೋಗಿಯ ಚಿಕಿತ್ಸೆ ಹಾಗೂ ಆರೋಗ್ಯ ಶಿಕ್ಷಣ ಒದಗಿಸುವುದು.
  • ವೈಜ್ಞಾನಿಕ ಸಭೆಗಳು, ವಿಚಾರ ಸಂಕೀರ್ಣಗಳು, ಗೋಷ್ಠಿ, ಕಾರ್ಯಗಾರ, ಸ್ನಾತಕೋತ್ತರ ಶಿಕ್ಷಣ ನೀಡುವುದು.