ಶಸ್ತ್ರ ಚಿಕಿತ್ಸೆಗಳು

ಸಂಸ್ಥೆಯು ಆಧುನಿಕ ಅರವಳಿಕೆ ಉಪಕರಣಗಳನ್ನು ಒಳಗೊಂಡ 04 ದೊಡ್ಡ ಶಸ್ತ್ರಚಿಕಿತ್ಸೆ ಹಾಗೂ 01 ಚಿಕ್ಕ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಹೊಂದಿದ್ದು, ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಾಗಿ ಎಂಡೋ ಯುರಾಲಜಿಕಲ್ ಉಪಕರಣ ಹಾಗೂ ಸಿಆರ್ ಉಪಕರಣಗಳನ್ನೊಳಗೊಂಡಿದೆ. ಸದರಿ ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಹೊಂದಿಕೊಂಡಂತೆ ಸುಸಜ್ಜಿತ ವ್ಯವಸ್ಥೆಯಿಂದ ಕೂಡಿದ 10 ಹಾಸಿಗೆಯ ಪೋಸ್ಟ್ ಆಪರೇಟಿವ್ ವಾರ್ಡ್‍ಗಳನ್ನು ಹೊಂದಿದೆ.