ಪಕ್ಷಿ ನೋಟ

ಸೂಪರ್ ಸ್ಪೆಷಾಲಿಟಿ ಆರೈಕೆ ಮತ್ತು ಸಂಶೋಧನೆಯನ್ನು ಅರಿತು ಸರ್ಕಾರವು ನೆಫ್ರೋ-ಯುರಾಲಜಿ ಸಂಸ್ಥೆಯನ್ನು ಸ್ಥಾಪಿಸಿ ಅಸ್ತಿತ್ವದಲ್ಲಿರುವ ಮಾನವಶಕ್ತಿ ಮತ್ತು ಭೌತಿಕ ಶಕ್ತಿಯನ್ನು ದಿನಾಂಕ : 19.01.2004ರಂದು ವೈದ್ಯಕೀಯ ಶಿಕ್ಷಣದಲ್ಲಿ ಕ್ರೂಢೀಕರಿಸಿತು. ತದನಂತರ, ಇದನ್ನು ವೃದ್ಧಿಸಲು ಹೆಚ್ಚುವರಿಯಾಗಿ ಮಾನವಶಕ್ತಿ ಮತ್ತು ಆಧುನಿಕ ಉಪಕರಣಗಳನ್ನು ಸಂಗ್ರಹಿಸಿತು. ಈ ಸಂಸ್ಥೆಯು ಗೌರವಾನ್ವಿತ ಮುಖ್ಯಮಂತ್ರಿಗಳೂ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀಯುತ ಹೆಚ್. ಖ. ಕುಮಾರಸ್ವಾಮಿಯವರಿಂದ ದಿನಾಂಕ : 04.10.2007ರಂದು ಸಾರ್ವಜನಿಕರಿಗೆ ಸಮರ್ಪಣೆಗೊಂಡಿತು. ಸಂಸ್ಥೆಯು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ನೆಫ್ರೋ-ಯುರಾಲಜಿ ಸಂಸ್ಥೆಯು, ಮೂತ್ರಪಿಂಡ ಮತ್ತು ಮೂತ್ರಕೋಶ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮಗಳು 1960ರ ಮೇರೆಗೆ ದಿನಾಂಕ: 19.01.2004 ರಂದು ನೋಂದಾಯಿಸಲ್ಪಟ್ಟಿದೆ. ಲಾಭ ಗಳಿಸುವ ಉದ್ದೇಶವಿಲ್ಲದೆ, ಸರ್ಕಾರದ ಅನುದಾನದ ನೆರವಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ, ಈ ಹಿಂದೆ ಕಾರ್ಯನಿರ್ವಹಿಸಿ ತೆರವು ಮಾಡಿರುವ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡದಲ್ಲಿ ರೂಪುಗೊಂಡಿದ್ದು, ದಿನಾಂಕ 09.04.2007ರಿಂದ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುತ್ತಿದೆ.

ಪ್ರಮುಖ ಕರ್ತವ್ಯಗಳು:

  • ನೆಫ್ರೋ-ಯುರಾಲಜಿ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ಖಾಯಿಲೆಗಳ ವಿವರಣೆ ನೀಡುವ ಒಂದು ಅಂತರÀರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸ್ಥಾಪಿಸಿ, ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುವುದು.
  • ನೆಫ್ರೋ-ಯುರಾಲಜಿಗೆ ಸಂಬಂಧಿಸಿದ ಖಾಯಿಲೆಗಳನ್ನು ಹೊಂದಿರುವ ರೋಗಿಗಳಿಗೆ ಮುಂದುವರಿದ ಸಮರ್ಪಕ ಚಿಕಿತ್ಸೆ ಒದಗಿಸುವುದು.
  • ನೆಫ್ರೋ-ಯುರಾಲಜಿ ವೈದ್ಯ ವಿಜ್ಞಾನ ಕ್ಷೇತ್ರದಲ್ಲಿನ ಖಾಯಿಲೆಗಳ ಬಗ್ಗೆ ತರಬೇತಿ, ಸಂಶೋಧನೆ, ರೋಗ ವಿದ್ಯಾಭ್ಯಾಸ, ರೋಗ ನಿರ್ಧಾರ, ಚಿಕಿತ್ಸೆಗಳಿಗೆ ನೆರವು ಮತ್ತು ಉತ್ತೇಜನ ನೀಡುವುದು.
  • ಮೂತ್ರಜನಕಾಂಗದ ಖಾಯಿಲೆಗಳಾದ ಮೂತ್ರಜನಕಾಂಗ ವಿಫಲತೆ, ಮೂತ್ರಪಿಂಡ ಕಸಿ (ಜೋಡಣೆ) ನೆರವೇರಿಸುವುದು.